Change your thought – Change the world – ನೀನು ಬದಲಾದರೆ ಜಗತ್ತು ಬದಲಾಗುತ್ತದೆ
ಮೂರು ದಿನಗಳ ಹಿಂದೆ ಬಿಎಂಟಿಸಿ ಚಾಲಕನ ನಿರ್ಲಕ್ಸ್ಯ ದೋರಣೆಗೆ ನನ್ನ ಬೈಕ್ ಜಖಂಗೊಂಡಿತ್ತು ಅದರ ಪ್ರಯುಕ್ತ ಬೈಕ್ ಸರ್ವಿಸ್ಗೆ ಬಿಟ್ಟಿದ್ದೆ. ಅದೇ ದಿನ ಸಂಜೆ ಬೈಕ್ ರೆಡಿಯಾಗಿದೆ ತೆಗೆದುಕೊಂಡು ಹೋಗಬಹುದು ಎಂದು ಮೆಕಾನಿಕ್ ನಿಂದ ಕರೆ ಬಂತು. ಬೈಕ್ ಹಾಂಡಲ್ ಬೆಂಡಾಗಿದ್ದರಿಂದ ಹೊಸದನ್ನು ಹಾಕಿದ್ದೇನೆ ಹಾಗೆಯೇ ಅದನ್ನು ಚೆಕ್ ಮಾಡಲು ಒಂದು ರೌಂಡ್ ಹೋಗಿ ಬರಲು ಹೇಳಿದ. ಅದೇಕೊ ನನಗೆ ಹಾಂಡಲ್ ಓರೆ ಇದೆ ಅನಿಸಿತು. ಬಂದು ಮೆಕಾನಿಕ್ ಗೆ ತಿಳಿಸಿದೆ. ಆತ ಸ್ವಲ್ಪ ರೆಪೇರಿ ಮಾಡಿ ಮತ್ತೆ ಒಂದು ರೌಂಡ್ ಕಳುಹಿಸಿದ. ಆಗಲೂ ನನಗೆ ಸಮಾಧಾನ ಆಗಲೇ ಇಲ್ಲ. ಇದನ್ನರಿತ ಮೆಕಾನಿಕ್ ತಾನೆ ಒಂದು ರೌಂಡ್ ಬೈಕ್ ಓಡಿಸಿ ನೋಡಿದ. ಕೊನೆಗೆ ಅವನು ನನಗೆ ಹೇಳಿದ್ದು ಬೈಕ್ ಹಾಂಡಲ್ ಸರಿಯಾಗಿದೆ ಆದರೆ ನೀವು ಓರೆ ಇದ್ದ ಹಾಂಡಲ್ ಗೆ ಅಡ್ಜಸ್ಟ್ ಆಗಿದ್ದಿರಿ ಹಾಗಾಗಿ ಇದೇ ಸರಿಯಿಲ್ಲ ಎನಿಸಿಸುತ್ತಿದೆ ಎರಡು ದಿನ ಓಡಿಸಿ ಸರಿಹೋಗುತ್ತದೆ ಎಂದ. ಅವನ ಮಾತು ನಿಜವೆನಿಸಿತು ಒಂದೆರಡು ದಿನ ಓಡಿಸುತ್ತಿದ್ದಂತೆ ಇದಕ್ಕೆ ಅಡ್ಜಸ್ಟ್ ಆಗಿಬಿಟ್ಟೆ. ನಮ್ಮ ಜೀವನದಲ್ಲೂ ಹೀಗೆಯೇ ಎಸ್ಟೋ ಭಾರಿ ನಾವು ಮಾಡುತ್ತಿರುವುದು ತಪ್ಪೇ ಆಗಿದ್ದರೂ ಅದರೊಂದಿಗೆ ಬೆರೆತು ಹೋಗಿ ಅದೇ ಸರಿಯೆಂದುಕೊಳ್ಳುತ್ತೇವೆ ಯಾರಾದರೂ ಅದು ತಪ್ಪು ಎಂದು ತಿಳಿಸಿದರೂ ಅದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸು ಸಿದ್ದವಾಗುವುದಿಲ್ಲ ಹಾಗಾಗಿ ವಾಸ್ತವಕ್ಕೆ ಮತ್ತು ಸತ್ಯವನ್ನು ಹೊರೆಹಚ್ಚುವ ಕೆಲಸಕ್ಕೆ ಇಳಿಯಬೇಕೆಂದರೆ ನಾವು ಬದಲಾವಣೆಗೆ ಸಿದ್ದರಾಗಬೇಕು. ಪೂರ್ವಾಗ್ರಹದಿಂದ ಹೊರಬರಬೇಕು ಆಗ ವಾಸ್ತವದಲ್ಲಿ ನಾವು ಅಂಟಿಕೊಂಡಿರುವ ತಪ್ಪು ಮತ್ತು ತಪ್ಪು ಗ್ರಹಿಕೆಗಳಿಂದ ಹೊರಬರಬಹುದು. ಅದು ಕಸ್ಟವಾದರೂ ಒಪ್ಪಿಕೊಳ್ಳಲೇ ಬೇಕು .
ದೇವರಾಜು ಚನ್ನಸಂದ್ರ
ಲೇಖಕರು & ಜೀವನ ಕೌಶಲ್ಯ ತರಬೇತಿದಾರರು.