SARASAMMANA SAMADHI by Dr. K. Shivarama Karantha | ಸರಸಮ್ಮನ ಸಮಾಧಿ
In the male dominated society, “the feminine mind and body in many spheres of life are his property; it has no independent existence”,and the country and the world vote. Animal life examiners have easily told us that such an idea is quite impossible. Modern psychologists can explain that. But no matter what the culture, the backsliding of the people imposed on their people, the sinful virtues, justice, and heaven-hell beliefs of the people, so many are bound by the spirit, that they do not dare to question the ‘morals’ of our pulse; Didn’t go on that adventure.Also, the human race is a species that lives a very insidious life. It is about the rule of law, punishment, indictment, when it comes to its subject, when it has to weigh itself, when it has to question its actions, and there is no hesitation about it.
ಪುರುಷ ಪ್ರಧಾನ ಸಮಾಜದಲ್ಲಿ “ಜೀವನದ ಅನೇಕ ಕ್ಷೇತ್ರಗಳಲ್ಲಿ ಸ್ತ್ರೀಯ ಮನಸ್ಸು ಮತ್ತು ಶರೀರಗಳೆರಡೂ ಅವನ ಸೊತ್ತು; ಅದಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ” ಎಂಬ ಭಾವನೆ ಜಗತ್ತಿನ ದೇಶ ಮತ್ತು ಮತಗಳು ಸಾರುತ್ತ ಬಂದಿವೆ. ಪ್ರಾಣಿ ಜೀವನ ಪರಿಶೀಲಕರು ಅಂಥ ಕಲ್ಪನೆ ತೀರ ಅಸಾಧು ಎಂದು ನಮಗೆ ಸುಲಭದಲ್ಲಿ ತಿಳಿಸಿಯಾರು. ಆಧುನಿಕ ಮನಶಾಸ್ತ್ರಜ್ಞರು ಅದನ್ನು ವಿವರಿಸಬಲ್ಲರು. ಆದರೆ, ಯಾರ ಸಂಸ್ಕೃತಿಯೇ ಆಗಲಿ, ತನ್ನ ಜನಗಳ ಮೇಲೆ ವಿಧಿಸಿದ ವರ್ತನೆಗಳ ಬೆನ್ನಿಗೆ, ಪಾಪ-ಪುಣ್ಯ, ನ್ಯಾಯ-ನೀತಿ, ಸ್ವರ್ಗ-ನರಕಗಳ ನಂಬಿಕೆಗಳನ್ನು ಬೆಸೆಯುತ್ತ ಬಂದಿರುವುದರಿಂದ, ಅದರಿಂದಾಗಿ ಅಸಂಖ್ಯರು ಮನೋದಾಸ್ಯದಿಂದ ಬಂಧಿತರಾಗಿರುವುದರಿಂದ, ನಮ್ಮ ನಾಡಿನ ಪರಂಪರೆ ಸಾರುತ್ತಿರುವ ‘ನೀತಿ’ಗಳನ್ನು ಪ್ರಶ್ನಿಸುವ ಧೈರ್ಯವನ್ನು ಇಲ್ಲಿಯವರು ತಳೆದಿಲ್ಲ; ಆ ಸಾಹಸಕ್ಕೆ ಹೋಗಿಲ್ಲ. ಅಲ್ಲದೆ ಮನುಷ್ಯ ವರ್ಗವೇ ಸಾಕಷ್ಟು ಕಪಟ ಜೀವನ ನಡೆಸುತ್ತಿರುವ ಒಂದು ಜಾತಿಯಗಿದೆ. ಅದು ಪರರ ವಿಚಾರದಲ್ಲಿ ಯಾವೆಲ್ಲ ನಿಯತ್ತು, ಶಿಕ್ಷೆ, ದೋಷಾರೋಪಣೆ ಮಾಡಲು ಸಿದ್ದವೋ, ತನ್ನ ವಿಷಯ ಬಂದಾಗ, ತನ್ನನ್ನು ತಾನು ತೂಗಬೇಕಾಗಿ ಬಂದಾಗ, ತನ್ನ ನಡೆಗಳನ್ನು ತಾನು ಪ್ರಶ್ನಿಸಲೇ ಬೇಕಾದಾಗ, ಆ ಬಗ್ಗೆ ಯಾವ ಸಂಕೋಚವೂ ಇಲ್ಲದಂತೆ ವರ್ತಿಸುತದೆ.ಅಂಥ ಮನಸ್ಸಿನ ಗಂಡಸು ಮತ್ತು ಹೆಂಗಸರ ನಡುವಣ ದಾಂಪತ್ಯದ ಚಂಚಲ ಸಂಬಂದಗಳನ್ನು ಕುರಿತು ಈ ಕಾದಂಬರಿ ಚಿತ್ರಿಸಿದೆ.
Reviews
There are no reviews yet.